STI Treatment

STI Publication Details of DSRC

ಜನನಾಂಗ ಮಾರ್ಗ ಮತ್ತು ಲೈಂಗಿಕ ಮಾರ್ಗದ ಸೋಂಕುಗಳು:

ಲೈಂಗಿಕ ಸಂಪರ್ಕದ ಸೋಂಕುಗಳು ಮತ್ತು ಜನನಾಂಗ ಮಾರ್ಗಗಳ ಸೋಂಕುಗಳು (ಎಸ್.ಟಿ.ಐ/ಆರ್.ಟಿ.ಐ) ಒಬ್ಬರಿಂದ ಒಬ್ಬರಿಗೆ ಹಲವಾರು ವಿದಗಳಿಂದ ಹರಡುತ್ತವೆ. ಸಿಪಿಲಸ್ ಮತ್ತು ಗೊನೋರಿಯಾ ಸೋಂಕುಗಳನ್ನೊಳಗೊಂಡಂತೆ 20 ತರಹದ ಲೈಂಗಿಕ ಸಂಪರ್ಕದ ಸೋಂಕುಗಳು ಮತ್ತು ಜನನಾಂಗ ಮಾರ್ಗಗಳ ಸೋಂಕುಗಳಿದ್ದು ಅವುಗಳಿಗೆ ಪರೀಕ್ಷೆ ಮತ್ತು ಚಿಕಿತ್ಸೆಗಳ ತಿಳಿವಳಿಕೆಯ ಜೊತೆಗೆ ಮಾಹಿತಿಗಳನ್ನು ಡಿ.ಎಸ್.ಆರ್.ಸಿ ಕ್ಲಿನಿಕ್ಗಳ ಮುಖಾಂತರ ಜನ ಸಾಮಾನ್ಯರಿಗೆ ತಲುಪಿಸಲಾಗುತ್ತದೆ. ಇನ್ನೂ ಗಮನಿಸಬೇಕಾದ ಅಂಶವೆಂದರೆ ಲೈಂಗಿಕ ಸಂಪರ್ಕದ ಸೋಂಕುಗಳು ಮತ್ತು ಜನನಾಂಗ ಮಾರ್ಗಗಳ ಸೋಂಕುಗಳ ಸಮರ್ಪಕವಾದ ಚಿಕಿತ್ಸೆ ಮತ್ತು ತಡೆಗಟ್ಟುವಿಕೆ ಯಿಂದ ಎಚ್ಐವಿ ಸೋಂಕಿನ ಪ್ರಮಾಣವನ್ನು 40% ರಷ್ಟು ಕಡಿಮೆಗೊಳಿಸ ಬಹುದಾಗಿದೆ.

ನ್ಯಾಕೋವತಿಯಿಂದ ರಾಜ್ಯದಲ್ಲಿ ಒಟ್ಟು 143 ಕೇಂದ್ರಗಳಿಂದ ಎಸ್.ಟಿ.ಐ ವರದಿಗಳನ್ನು ಸಂಗ್ರಹಿಸಲಾಗುತ್ತಿದೆ. ಅವುಗಳಲ್ಲಿ 54 ಡಿ.ಎಸ್.ಆರ್.ಸಿ ಕೇಂದ್ರಗಳಾದರೆ ಉಳಿದ 76 ಟಿ.ಐ ಎನ್.ಜಿ.ಓ ಕೇಂದ್ರಗಳಾಗಿರುತ್ತವೆ.

ಡಿ.ಎಸ್.ಆರ್.ಸಿ ಕೇಂದ್ರದ ಕಾರ್ಯನಿರ್ವಹಣೆ:

ಪ್ರತಿಯೊಂದು ಡಿಎಸ್ಆರ್ಸಿ ಕೇಂದ್ರಕ್ಕೆ ನ್ಯಾಕೋ ಮಾರ್ಗ ಸೂಚಿಯನ್ವಯ ಪೋಸ್ಟರ್ಗಳು, ಫ್ಲಿಪ್ ಬುಕ್ಗಳು, ಮತ್ತು ದಾಖಲಾತಿಗೆ ಸಂಬಂಧಿಸಿದ ವಹಿಗಳನ್ನು ಪೂರೈಸಲಾಗಿದ್ದು ಒಬ್ಬ ಆಪ್ತಸಮಾಲೋಚಕರು ಕಾರ್ಯ ನಿರ್ವ ಹಿಸುತ್ತಿರುತ್ತಾರೆ. ಆಪ್ತಸಮಾಲೋಚಕರು ಕೇಂದ್ರಕ್ಕೆ ಬರುವ ರೋಗಿಗಳಿಗೆ ಲೈಂಗಿಕ ಸಂಪರ್ಕ ಸೋಂಕನ್ನು ನಿಯಂತ್ರಿಸುವುದಕ್ಕೋಸ್ಕರ ಮಾಹಿತಿ ನೀಡಿ, ಆಪ್ತಸಮಾಲೋಚನೆ ನಡೆಸಿ, ರೋಗಿಯ ಚಿಕಿತ್ಸೆ ನಿರೋದ್ ಉಪಯೋಗ ಜೊತೆಗೆ ಗಂಡ/ ಹೆಂಡತಿ/ ಜೊತೆಗಾರರ ಚಿಕಿತ್ಸೆಯ ಪ್ರಾಮುಖ್ಯತೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. ಉಚಿತ ಎಸ್.ಟಿ.ಐ/ಆರ್.ಟಿ.ಐ ಔಷದಿಗಳ ವಿತರಣೆ ಜೊತೆಗೆ ಕಾಂಡೋಮನ್ನು ವಿತರಿಸಿ ರೋಗಿಯನ್ನು ಹೆಚ್.ಐ.ವಿ ಮತ್ತು ಸಿಫಿಲಸ್ ಪರೀಕ್ಷೆಗಾಗಿ ಐಸಿಟಿಸಿ ಕೇಂದ್ರಕ್ಕೆ ಕಳುಹಿಸುತ್ತಾರೆ.

ಎಸ್.ಟಿ.ಐ/ಆರ್.ಟಿ.ಐ ಕ್ಲಿನಿಕ್ಗಳ ಗುರುತು:

ನ್ಯಾಕೋ ಅನುದಾನದಡಿಯಲ್ಲಿರುವ ಎಸ್.ಟಿ.ಐ/ಆರ್.ಟಿ.ಐ ಕ್ಲಿನಿಕ್ಗಳನ್ನು “ಸುರಕ್ಷಾ ಕ್ಲಿನಿಕ್” ಎಂದು ಹೆಸರಿಸಲಾಗಿದೆ. ಅವುಗಳು ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಸುರಕ್ಷಾ ಕ್ಲಿನಿಕ್ಗಳಲ್ಲಿ ರೋಗಲಕ್ಷಣಗಳಿಗೆ ಅನುಗುಣವಾಗಿ ವಿವಿದ ಏಳು ಬಣ್ಣಗಳ ಪ್ಯಾಕೆಟ್ಗಳಲ್ಲಿ ಎಸ್.ಟಿ.ಐ/ಆರ್.ಟಿ.ಐ ಔಷಧಗಳನ್ನು “ಉಚಿತವಾಗಿ” ರೋಗಿಗಳಿಗೆ ನೀಡಲಾಗುತ್ತಿದೆ.



Preferred Private provider (PPP) for HRGs

The color coded STI/RTI kits are provided by PPP to HRGs. The preferred providers are selected by TI, generally recommended by HRG community. The consultation and STI drugs are provided free of cost to HRGs.

RMC of HRGs

As per NACO’s guidelines each core -HRG is suppose to undergo at least one STI check up once in a quarter. Even if, the HRG is asymptomatic for STI/RTI, they are referred to Preferred Provider. This is termed as Regular Medical Checkup (RMC) and the core group HRGs should also be encouraged for undergoing Syphilis and HIV test bi annually.