Integrated Counseling & Testing Center


List of ICTC in Karnataka     ICTC Publication DAPCO Blog

ICTC: ಐಸಿಟಿಸಿ: ಐಸಿಟಿಸಿ ಕೇಂದ್ರಗಳಲ್ಲಿ ಸ್ವಯಂಪ್ರೇರಿತ ಆಪ್ತಸಮಾಲೋಚನೆ ಮತ್ತು ಹೆಚ್ಐವಿ ಪರೀಕ್ಷೆಯನ್ನು ಮಾಡಲಾಗುತ್ತದೆ.

ಸಮಗ್ರ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರ ಐಸಿಟಿಸಿ .ಯಲ್ಲಿ ದೊರೆಯುವ ಸೌಲಭ್ಯಗಳು.

  1. ಹೆಚ್ಐವಿ/ಏಡ್ಸ್ನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ಹೆಚ್ಐವಿ ಹರಡುವ ವಿಧಾನಗಳನ್ನು ತಿಳಿಸುವುದು.
  2. ಹೆಚ್ಐವಿ ತಡೆಗಟ್ಟುವುದನ್ನು ಬಲಪಡಿಸುವುದು ಮತ್ತು ನಡವಳಿಕೆ ಬದಲಾವಣಿಯನ್ನು (ಅಪಾಯವನ್ನು ಕಡಿಮೆಗೊಳಿಸುವುದು).
  3. ಹೆಚ್ಐವಿ ಪಾಸಿಟೀವ್ ಜನರಲ್ಲಿ ನಡವಳಿಕೆ ಬದಲಾವಣೆಯನ್ನು ಅನುಕೂಲಗೊಳಿಸುತ್ತದೆ.
  4. ಹೆಚ್ಐವಿ ನೆಗೆಟೀವ್ ಜನರನ್ನು ಜೀವನ ಪರ್ಯಂತ ನೆಗೆಟೀವ್ ಇರುವಂತೆ ಹಾಗೂ ಹೆಚ್ಐವಿ ಸೋಂಕಿತರಿಗೆ ಹೆಚ್ಐವಿ ಮತ್ತಷ್ಟು ಹರಡದಂತೆ ( ಪಾಸಿಟೀವ್ ಅನ್ನು ತಡೆಗಟ್ಟುವಿಕೆ) ಆಪ್ತಸಮಾಲೋಚನೆ ಮಾಡುವುದು ಹಾಗೆಯೇ ಆರೈಕೆ ಸೇವೆಗಳ ಬಗ್ಗೆ ತಿಳಿಸುತ್ತದೆ.
  5. ಹೆಚ್ಐವಿ ಪಾಸಿಟೀವ್ ವ್ಯಕ್ತಿಗಳು ತಮ್ಮ ಹೆಚ್ಐವಿ ಪಾಸಿಟೀವ್ ಸ್ಥಿತಿಯನ್ನು ಸ್ವೀಕರಿಸಿ ಅದನ್ನು ನಿಭಾಯಿಸಲು ಸಹಕಾರಿಯಾಗಿದೆ.
  6. ಜಿಲ್ಲಾ ಮಟ್ಟದ ನೆಟ್ವಕ್ರ್ಸ್ ಮೂಲಕ ಮಾನಸಿಕ ಬೆಂಬಲವನ್ನು ಒದಗಿಸುತ್ತದೆ.
  7. ಹೆಚ್ಐವಿ ಸೋಂಕಿತರ ಅಗತ್ಯತೆಯನ್ನು ಗುರುತಿಸಿ ಅವಕಾಶವಾದಿ ಸೋಂಕುಗಳಿಗೆ ಚಿಕಿತ್ಸೆಯನ್ನು ಒದಗಿಸುವುದು ಮತ್ತು ಎ.ಆರ್.ಟಿ ಒದಗಿಸುವಲ್ಲಿ ಸಹಾಯ ಮಾಡುವುದು.
  8. ಪೋಷಕರಿಂದ ಮಕ್ಕಳಿಗೆ ಹೆಚ್ಐವಿ ಹರಡದಂತೆ ತಡೆಗಟ್ಟುತ್ತದೆ.
  9. ಟಿಬಿ(ಕ್ಷಯ) ರೋಗಲಕ್ಷಣಗಳಿಗೆ ಪರೀಕ್ಷೆಯನ್ನು ಮಾಡಲಾಗುತ್ತದೆ.
  10. ಹೆಚ್ಐವಿ ಸಂಬಂಧಿತ ಸೋಂಕುಗಳು ಮತ್ತು ಎಸ್ಟಿಐಗಳ ನಿರ್ವಹಣೆಗೆ ಅನುಕೂಲ ಮಾಡಿ ಕೊಡುತ್ತವೆ.
  11. ಅನಾಥರ ಆರೈಕೆಯನ್ನು ಪ್ರೋತ್ಸಾಹಿಸುತ್ತದೆ.
  12. ಸಮುದಾಯಗಳಲ್ಲಿ ಹೆಚ್ಐವಿ ಗೋಚರತೆಯನ್ನು ಹೆಚ್ಚಿಸುತ್ತದೆ.
  13. ಪ್ರಯೋಗ ಶಾಲಾ ತಂತ್ರಜ್ಞರು ಎಸ್ಟಿಐ ನಿಂದ ರೆಫರ್ಮಾಡಲ್ಪಟ್ಟ ಅರ್ಥಿಗಳಿಗೆ ಸಿಫಿಲಿಸ್ ಪರೀಕ್ಷೆಯನ್ನು ಮಾಡಲಾಗುತ್ತಿದೆ.

ಐಸಿಟಿಸಿಗಳಲ್ಲಿ ಪರೀಕ್ಷಿಸಲ್ಪಟ್ಟ ಸಾಮಾನ್ಯ ಜನರಲ್ಲಿ ಹೆಚ್ಐವಿಯ ಇರುವಿಕೆಯ ಪ್ರಮಾಣ ಬಾಗಲಕೋಟೆ (10.5%), ಗದಗ (5.5%) ರಾಯಚೂರು (4.9%) ಧಾರವಾಡ (4.9%) ವಿಜಯಪುರ (4.58%) ಬೆಳಗಾಂ (4.4%) ಕೊಪ್ಪಳ (4.3%) ಬಳ್ಳಾರಿ (3.8%) ಮೈಸುರು (3.5%) ಒಟ್ಟಾರೆ ಕರ್ನಾಟಕದಲ್ಲಿ 3.3% ರಷ್ಟು ಸಾಮಾನ್ಯ ಜನರು ಹೆಚ್ಐವಿ ಸೋಂಕಿತರಾಗಿದ್ದಾರೆ.



ಸಾಮಾನ್ಯ ಜನರಲ್ಲಿ ಹೆಚ್ಐವಿ ಪರೀಕ್ಷೆ ಮತ್ತು ಆಪ್ತಸಮಾಲೋಚನೆ ಏಪ್ರಿಲ್-13 ರಿಂದ ಮಾರ್ಚ್ 14

District Positivity
ಧಾರವಾಡ 1.60%
ಕೊಡಗು 0.90%
ಬೆಂಗಳೂರು ಗ್ರಾಮಾಂತರ 0.80%
ಬೆಂಗಳೂರು ನಗರ 1.40%
ತುಮಕೂರು 1.40%
ಬಳ್ಳಾರಿ 1.80%
ಚಾಮರಾಜನಗರ 1.30%
ಹಾಸನ 1.40%
ಮಂಡ್ಯ 1.40%
ಉಡುಪಿ 1.80%
ಕಲ್ಬುರ್ಗಿ 1.40%
ಕೋಲಾರ 1.40%
ಮೈಸೂರು 1.80%
ಗದಗ 2.60%
ವಿಜಯಪುರ 2.60%
ಶಿವಮೊಗ್ಗ 1.10%
ಬೆಳಗಾಂ 2.80%
ರಾಮನಗರ 0.60%
ಕೊಪ್ಪಳ 2.70%
ಹಾವೇರಿ 1.40%
ಚಿಕ್ಕಬಳ್ಳಾಪುರ 1.40%
ಬಾಗಲಕೋಟೆ 5.50%
ಚಿಕ್ಕಮಗಳೂರು 1.40%
ದಾವಣಗೆರೆ 2.00%
ರಾಯಚೂರು 3.10%
ಉತ್ತರಕನ್ನಡ 0.90%
ಬೀದರ್ 1.50%
ಯಾದಗಿರಿ 1.80%
ದಕ್ಷಿಣಕನ್ನಡ 1.50%
ಚಿತ್ರದುರ್ಗ 1.80%
ಒಟ್ಟು 1.80%