ಹೆಚ್.ಐ.ವಿ/ಏಡ್ಸ್ ಮತ್ತು ಕ್ಷಯ (ಟಿ.ಬಿ) ರೋಗ

ಹೆಚ್.ಐ.ವಿಯಿಂದಾಗಿ ರೋಗ ನಿರೋಧಕ ಶಕ್ತಿ ಕಡಿಮೆಮಾಗುವುದರಿಂದ ಹೆಚ್.ಐ.ವಿ. ಸೋಂಕಿತರಲ್ಲಿ ಟಿ.ಬಿ. ತಗಲು ಸಾಧ್ಯತೆ ಇತರರಿಗಿಂತ ಶೇ.5 ಪಟ್ಟು ಹೆಚ್ಚು. ಟಿ.ಬಿ.ಯು ಒಂದು ಸಾಮಾನ್ಯ ಅವಕಾಶವಾದಿ ಸೋಂಕು. ಪ್ರಸ್ತುತ ರಾಜ್ಯದಲ್ಲಿ 64 ಸಿಬಿನ್ಯಾಟ್ (CBNAAT- Cartridge Based NucleicAcid Amplification Test) ಮೆಷಿನ್‍ಗಳಿದ್ದು, ಇದರಲ್ಲಿ ಅರ್ಥಿಯ ಕಫ ಪರೀಕ್ಷೆಗೆ ಸಂಬಂಧಪಟ್ಟಂತೆ 100% ಕ್ಷಯರೋಗ ಫಲಿತಾಂಶವನ್ನು ಕಂಡುಕೊಳ್ಳಬಹುದಾಗಿದೆ ಹಾಗೂ ಪರಿಣಾಮಕಾರಿ ಮತ್ತು ಗುಣಮಟ್ಟದ ಚಿಕಿತ್ಸೆಯು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುವುದು ಅಷ್ಟೇ ಅಲ್ಲದೆ ಹೆಚ್.ಐ.ವಿ./ಟಿ.ಬಿಗೆ ಸಂಬಂಧಪಟ್ಟಂತೆ ಪರಿಣಾಮಕಾರಿಯಾದ ಆಪ್ತ ಸಮಾಲೋಚನೆಯನ್ನು ಕೂಡ ಮಾಡಲಾಗುತ್ತಿದೆ.

ಹೆಚ್.ಐ.ವಿ. ರೋಗಿಗಳಲ್ಲಿ ಕ್ಷಯರೋಗ (ಟಿ.ಬಿ) ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಐ.ಸಿ.ಟಿ.ಸಿ. ಕೇಂದ್ರಗಳಿಗೆ ಬರುವಂತಹ ಎಲ್ಲಾ ಅರ್ಥಿಗಳನ್ನು ಕಡ್ಡಾಯವಾಗಿ ಕ್ಷಯ ರೋಗ ಪತ್ತೆ ಮಾಡುವ ಸಲುವಾಗಿ ಪರಿಷ್ಕøತ ರಾಷ್ಟ್ರೀಯ ಕ್ಷಯರೋಗ ಕೇಂದ್ರಕ್ಕೆ ರೆಫರ್ ಮಾಡಲಾಗುವುದು ಹಾಗೂ ಆರ್.ಎನ್.ಟಿ.ಸಿ.ಪಿ. ಕೇಂದ್ರಕ್ಕೆ ಭೇಟಿ ನೀಡುವಂತಹ ಅರ್ಥಿಗಳಲ್ಲಿ ಹೆಚ್.ಐ.ವಿ. ಪರೀಕ್ಷೆ ಕುರಿತಂತೆ ಐ.ಸಿ.ಟಿ.ಸಿ. ಕೇಂದ್ರಕ್ಕೆ ರೆಫರ್ ಮಾಡಲಾಗುತ್ತದೆ. ಹೀಗೆ ಆರ್.ಎನ್.ಟಿ.ಸಿ.ಪಿ ಮತ್ತು ಐ.ಸಿ.ಟಿ.ಸಿ. ಕೇಂದ್ರಗಳಲ್ಲಿ ಪರೀಕ್ಷಿಸಿದಂತಹ ಅರ್ಥಿಗಳಲ್ಲಿ ಪಾಸಿಟೀವ್ ಬಂದಂತಹ ಅರ್ಥಿಗಳನ್ನು ಕೂಡಲೇ ಚಿಕಿತ್ಸೆ ನೀಡುವ ಸಲುವಾಗಿ ಎ.ಆರ್.ಟಿ. ಕೇಂದ್ರಕ್ಕೆ ರೆಫರ್ ಮಾಡಲಾಗುವುದು :

ಟಿ.ಬಿ. ರೋಗದ ಸಾಮಾನ್ಯ ಲಕ್ಷಣಗಳು

  1. ಎರಡು ವಾರ ಅಥವಾ ಹೆಚ್ಚಿನ ಅವಧಿಯ ಕೆಮ್ಮು
  2. ಕೆಲವು ವೇಳೆ ಕಫದ ಜೊತೆಗೆ ರಕ್ತ ಕಾಣಿಸುವುದು.
  3. ಜ್ವರ ವಿಶೇಷವಾಗಿ ರಾತ್ರಿ ವೇಳೆ.
  4. ತೂಕದ ಇಳಿಕೆ.
  5. ಹಸಿವಾಗದಿರುವುದು.
  6. ರಾತ್ರಿ ವೇಳೆ ಬೆವರುವುದು.